Thursday, June 26, 2025

ಮೆಗಾಸ್ಟಾರ್​​​ ಚಿರಂಜೀವಿಗೆ ಗಿನ್ನೆಸ್​​​ ವಿಶ್ವ ದಾಖಲೆ ಗರಿ.. 24 ಸಾವಿರ ನೃತ್ಯ ಪ್ರದರ್ಶನ ನೀಡಿದ ನಟ!

ಮೆಗಾಸ್ಟಾರ್​​​ ಚಿರಂಜೀವಿ ಗಿನ್ನೆಸ್​​​ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಸಿನಿಮಾ ರಂಗದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರ ನಟ, ಡ್ಯಾನ್ಸರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇದೇ ವಿಚಾರವಾಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

69 ವರ್ಷ ವಯಸ್ಸಿನ ಚಿರಂಜೀವಿಯವರು ತನ್ನ 45 ವರ್ಷಗಳ ಅವಧಿಯಲ್ಲಿ 156 ಸಿನಿಮಾಗಳಲ್ಲಿ 537 ಹಾಡುಗಳಲ್ಲಿ 24000 ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ವಿಚಾರವಾಗಿ ವಿಶೇಷ ಗೌರವವನ್ನು ಪಡೆದಿದ್ದಾರೆ.

ಅಮೀರ್​​ ಖಾನ್​​ ಅವರಿಂದ ಚಿರಂಜೀವಿಯವರು ವಿಶ್ವ ಗಿನ್ನೆಸ್​ ದಾಖಲೆಯ ಪ್ರಶಸ್ತಿ ಪಡೆದರು.

ಚಿರಂಜೀವಿಯವರು 1978ರಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟರು. ಖೈದಿ ನಂ 150, ಸೈರಾ ನರಸಿಂಹ ರೆಡ್ಡಿ, ಆಚಾರ್ಯ, ಗಾಡ್​ಫಾದರ್​​ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಸಿನಿಮಾ ಸೇರಿದಂತೆ ಬಹುಭಾಷೆಗಳಲ್ಲಿ ಬಣ್ಣ ಹಚ್ಚಿದ್ದಾರೆ.

Related Articles

Latest Articles