Thursday, July 18, 2024

ಸ್ನೇಹಿತನಿಂದ ಅಕ್ರಮ ಸಂಬಂಧದ ಬ್ಲ್ಯಾಕ್​ ಮೇಲ್: ನವವಿವಾಹಿತ ಬಲಿ

ಒಂದು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕು ಕಜ್ಜಿಹುಂಡಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ (28) ಆತ್ಮಹತ್ಯೆಗೆ ಶರಣಾದ ಯುವಕ.

ಪರಸ್ತ್ರೀ ಸಂಬಂಧ ಬಹಿರಂಗಪಡಿಸುತ್ತೇನೆಂದು ಮೃತ ಸ್ನೇಹಿತನೋರ್ವ ಹಣಕ್ಕಾಗಿ ಬ್ಲ್ಕ್ಯಾಕ್ ಮೇಲ್​ ಮಾಡಿದ್ದು, ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸ್ನೇಹಿತ ರವಿ ಎನ್ನುವಾತ ಪರಸ್ತ್ರೀ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆಂದು ಹಣಕ್ಕಾಗಿ ಸಂತೋಷ್​ಗೆ ಬ್ಲ್ಯಾಕ್‌ಮೇಲ್ ಮಾಡಿದ್ದ.

ಅಲ್ಲದೇ ಬೆದರಿಸಿ 2 ಲಕ್ಷ ರೂ. ವಸೂಲಿ ಮಾಡಿದ್ದ. ಆದರೂ ಸಮ್ಮನಾಗದ ರವಿ, ಇನ್ನಷ್ಟು ಹಣ ಬೇಕೆಂದು ಮತ್ತೆ ಮತ್ತೆ ಬ್ಲ್ಯಾಕ್​ ಮೇಲ್​ ಮಾಡಿದ್ದಾನೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.

Related Articles

Latest Articles